ಕಿರಿಯ ಪತ್ರಕರ್ತ ಎಂದರೆ ಸಾಮಾನ್ಯವಾಗಿ ಪತ್ರಿಕಾ ವಿಭಾಗದಲ್ಲಿ ಕಿರಿಯ ಕೆಲಸಗಾರ. ಇವನ ಕೆಲಸವು ಪತ್ರಿಕೆಯ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಟೈಪ್ ಮಾಡಿದ ಕಥೆಗಳನ್ನು ಕಳಿಸುವುದು. ೧೯೭೨ರಲ್ಲಿ ಕಿರಿಯ ಪತ್ರಕರ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದ ಹೆರಾಲ್ಡ್ ಸನ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಬ್ರೂಸ್ ಗುತ್ರೀ ಅವರ ಪ್ರಕಾರ, ವರದಿಗಾರರು ತಮ್ಮ ಕಥೆಗಳನ್ನು ಕಸಾಯಿಖಾನೆಯ ಕಾಗದ ಸ್ಲಿಪ್‌ನಲ್ಲಿ ಟೈಪ್ ಮಾಡುತ್ತಾರೆ. ನಂತರ ಕಿರಿಯ ಪತ್ರಕರ್ತ ಆ ಕಥೆಯನ್ನು ಪಕ್ಕದ ಉಪಸಂಪಾದಕರ ಕೋಣೆಗೆ ಕಳುಹಿಸುತ್ತಾನೆ. ಆದ್ದರಿಂದ ಅದು 'ನಕಲು' ಎಂದು ಕರೆಯಲ್ಪಡುತ್ತದೆ. ಕಥೆಯ ಪ್ರತಿ ಸ್ಲಿಪ್ ಸುಮಾರು ೬ ಕಾರ್ಬನ್ ಪ್ರತಿಗಳನ್ನು ಹೊಂದಿತ್ತು. ಮೂಲ ಕಥೆಯ ಸ್ಲಿಪ್‌ ಅನ್ನು ಇತರವುಗಳಿಂದ ಬೇರ್ಪಡಿಸಿ ಇತರ ವಿಭಾಗಗಳಿಗೆ ಕಳಿಸಿ, ನಂತರ ಕಾರ್ಬನ್ ಪ್ರತಿಗಳನ್ನು ವಿತರಣೆಗಾಗಿ ಕಳಿಸುವುದು ಕಿರಿಯ ಪತ್ರಕರ್ತನ ಕೆಲಸವಾಗಿತ್ತು.ಹೊಸ ಪ್ರಕಾಶನ ಮತ್ತು ಮುದ್ರಣ ತಂತ್ರಜ್ಞಾನದ ಆಗಮನದಿಂದ ಈ ಸ್ಥಾನವು ಈಗ ಬಹುತೇಕ ಅಳಿದುಹೋಗಿದೆ. ಆದರೆ ಎರಡನೇ ಮಹಾಯುದ್ಧದ ನಂತರದ ಮೊದಲ ಎರಡು ದಶಕಗಳಲ್ಲಿ, ಯು. ಎಸ್ ನಲ್ಲಿ ಮಧ್ಯಮ ಮತ್ತು ದೊಡ್ಡ ಪತ್ರಿಕೆಗಳ ಹೆಚ್ಚಿನ ಸಂಪಾದಕರು ಇನ್ನೂ ತಮ್ಮ ಕಿರಿಯ ಪತ್ರಕರ್ತನನ್ನು "ಪತ್ರಿಕೆ ವಿತರಣೆಗೆ" ಅನಿವಾರ್ಯವೆಂದು ಪರಿಗಣಿಸಿದ್ದಾರೆ. ಈ ಸ್ಥಾನವನ್ನು ಮಹತ್ವಾಕಾಂಕ್ಷಿ ಪತ್ರಕರ್ತರಿಗೆ ಪ್ರಮುಖ ಪ್ರವೇಶ ಬಿಂದುವೆಂದು ಪರಿಗಣಿಸಲಾಗಿತ್ತು. ಹೆಚ್ಚಿನ ಪತ್ರಕರ್ತರು ಕಿರಿಯ ಪತ್ರಕರ್ತ ಆಗಿಯೇ ತಮ್ಮ ಪತ್ರಿಕೋದ್ಯಮ ಜೀವನವನ್ನು ಪ್ರಾರಂಭ ಮಾಡುತ್ತಾರೆ. == ಮಾಜಿ ಕಿರಿಯ ಪತ್ರಕರ್ತರು == == ಕಾಲ್ಪನಿಕತೆಯಲ್ಲಿ ಕಿರಿಯ ಪತ್ರಕರ್ತರು == ಹಾಪ್ ಹಜಾರ್ಡ್ "ಡೈಲಿ ಸ್ಟಾರ್‌ನ ರಾಕ್ಷಸ ಕಿರಿಯ ಪತ್ರಕರ್ತ!" (ಏಸ್ ಕಾಮಿಕ್ಸ್, ೧೯೪೦-೧೯೪೭) ಜೋಸೆಫ್ ಬರ್ಗರ್ ಅವರ ೧೯೩೮ ರ ಬಾಲಾಪರಾಧಿ ಕಾದಂಬರಿ ಕಾಪಿ ಬಾಯ್‌ನಲ್ಲಿ, ಜೆರ್ರಿ ಜೋನ್ಸ್ ನ್ಯೂಜೆರ್ಸಿಯ ದಿನಪತ್ರಿಕೆಯೊಂದರಲ್ಲಿ ಒಬ್ಬ ಕಿರಿಯ ಪತ್ರಕರ್ತನಾಗಿರುತ್ತಾನೆ. ನಂತರ ಅವನು ವರದಿಗಾರನಾಗುತ್ತಾನೆ. ೧೯೩೭ ರ ಚಲನಚಿತ್ರ ಫಿಟ್ ಫಾರ್ ಎ ಕಿಂಗ್ ನಲ್ಲಿ, ವರ್ಜಿಲ್ ಆಂಬ್ರೋಸ್ ಜೆರೆಮಿಯಾ ಕ್ರಿಸ್ಟೋಫರ್ 'ಸ್ಕೂಪ್' ಜೋನ್ಸ್ ಪಾತ್ರದಲ್ಲಿದ್ದ ಜೋ ಇ. ಬ್ರೌನ್ ಒಬ್ಬ ಕಿರಿಯ ಪತ್ರನಾಗಿರುತ್ತಾನೆ ಆತನಿಗೆ ವರದಿಗಾರನಾಗಲು "ದೊಡ್ಡ ಅವಕಾಶ" ನೀಡಲಾಗುತ್ತದೆ. ೧೯೨೬ರ ಅಟ್ಟಾ ಬಾಯ್ ಚಿತ್ರದಲ್ಲಿ ಮಾಂಟಿ ಬ್ಯಾಂಕ್ಸ್ ಪಾತ್ರ ನಿರ್ವಹಿಸಿದ ಮಾಂಟಿ ಮಿಲ್ಡೆ, ನ್ಯೂಯಾರ್ಕ್ನ ದೊಡ್ಡ ದಿನಪತ್ರಿಕೆಯೊಂದರಲ್ಲಿ ಕಿರಿಯ ಪತ್ರಕರ್ತನಾಗಿ ಕೆಲಸ ಮಾಡುವ ಹುಡುಗನಾಗಿದ್ದು, ಎಲ್ಲರಿಂದ ಕುಚೇಷ್ಟೆಗೆ ಒಳಗಾಗಿರುತ್ತಾನೆ. ಕೊನೆಗೆ ಅಪಹರಣದ ಪ್ರಕರಣವನ್ನು ಪರಿಹರಿಸುವಲ್ಲಿ ಪತ್ರಿಕೆಯ ಸ್ಟಾರ್ ವರದಿಗಾರನನ್ನು ಸೋಲಿಸುತ್ತಾನೆ. ಸೂಪರ್ಮ್ಯಾನ್ ೧೯೩೮-೧೯೪೦ ರೇಡಿಯೋ ಧಾರಾವಾಹಿಯಲ್ಲಿ ಜಿಮ್ಮಿ ಓಲ್ಸೆನ್, ವರದಿಗಾರನಾಗುವ ಮೊದಲು ಡೈಲಿ ಪ್ಲಾನೆಟ್ನಲ್ಲಿ ಕಿರಿಯ ಪತ್ರಕರ್ತನಾಗಿ ಕೆಲಸ ಪ್ರಾರಂಭ ಮಾಡಿರುತ್ತಾನೆ. ರೂಡಿ ರಾಲ್ಸ್ ಡೈಲಿ ಹೆರಾಲ್ಡ್ನಲ್ಲಿ ಅಪರಾಧದ ಸುದ್ದಿಗಳನ್ನು ನೋಡಿಕೊಳ್ಳುವ ಕಿರಿಯ ಪತ್ರಕರ್ತನಾಗಿದ್ದು , "ಮುಷ್ಟಿಯು ಪದಗಳಿಗಿಂತ ಜೋರಾಗಿ ಮಾತನಾಡುತ್ತದೆ ಎಂದು ಕಂಡುಕೊಳ್ಳುತ್ತಾನೆ!" (ಹೆಡ್ಲೈನ್ ಕಾಮಿಕ್ಸ್) == ಉಲ್ಲೇಖಗಳು == == ಮುಂದೆ ಓದಿ == ಕ್ಯಾನ್ಬೆರಾ ಟೈಮ್ಸ್ (17 ಜುಲೈ 2008). "ಕಾಪಿ ಬಾಯ್ ತನ್ನ ಉದ್ಯಮದ ನಾಯಕನಾದನು"